*ಜೀವ ಬಂಧನ*
ನನ್ನೆದೆಯ ತೋಟದಲಿ
ಮಂದಾರ ಹೂ ನೀನು
ನೀ ನಗಲು ಅದು ಎನಗೆ
ಮುಂಗಾರಿನ ನಲಿವು
ನಿನ್ನ ಮೊಗದಲರಳಿದ
ಮೋಹಕದ ನಗೆಯಲ್ಲಿ
ಕರಗಿ ಹೊಗುವವೆಲ್ಲ
ಬಡಜೀವನದ ನೋವು
ಏರಿಳಿವ ಅಲೆ ಅಬ್ಬರ
ಸಾಗರವೀ ಸಂಸಾರ
ನಗುನಗುತ ಸಾಗಿಸುವ
ಬಾಳ ದೋಣಿ ನಾವು
ಎಲ್ಲಿದ್ದೆವೋ ಆ ಮೊದಲು
ಹಸೆಮಣೆಯಲೊಂದಾಗಿ
ಬೆಸೆದುಕೊಂಡೆವು ಅಂತೂ
ಬೆರೆತಂತೆ ಬೆಲ್ಲ ಮಾವು
ಹಿಂಜನ್ಮವ ಕಂಡಿಲ್ಲವೋ
ಮುಂಜನ್ಮವ ಅರಿತಿಲ್ಲವೋ
ಜನ್ನ ಜನ್ಮಗಳ ಮೈತ್ರಿಯು
ನಮ್ಮೀ ಬಾಳ ಬಂಧನವು
ನಿನ್ನೆಯ ಕಹಿ ನಮಗೇಕೆ
ನಾಳಿನಾ ವ್ಯಥೆಯು ಬೇಕೆ
ಇಂದನು ಚಂದದಿ ಕಳೆವ
ನೆಮ್ಮದಿಗೆ ಇಲ್ಲ ಬರವು
ತ್ರಿನೇತ್ರಜ್.
(ಶಿವಕುಮಾರ. ಹಿರೇಮಠ)

ನನ್ನೆದೆಯ ತೋಟದಲಿ
ಮಂದಾರ ಹೂ ನೀನು
ನೀ ನಗಲು ಅದು ಎನಗೆ
ಮುಂಗಾರಿನ ನಲಿವು
ನಿನ್ನ ಮೊಗದಲರಳಿದ
ಮೋಹಕದ ನಗೆಯಲ್ಲಿ
ಕರಗಿ ಹೊಗುವವೆಲ್ಲ
ಬಡಜೀವನದ ನೋವು
ಏರಿಳಿವ ಅಲೆ ಅಬ್ಬರ
ಸಾಗರವೀ ಸಂಸಾರ
ನಗುನಗುತ ಸಾಗಿಸುವ
ಬಾಳ ದೋಣಿ ನಾವು
ಎಲ್ಲಿದ್ದೆವೋ ಆ ಮೊದಲು
ಹಸೆಮಣೆಯಲೊಂದಾಗಿ
ಬೆಸೆದುಕೊಂಡೆವು ಅಂತೂ
ಬೆರೆತಂತೆ ಬೆಲ್ಲ ಮಾವು
ಹಿಂಜನ್ಮವ ಕಂಡಿಲ್ಲವೋ
ಮುಂಜನ್ಮವ ಅರಿತಿಲ್ಲವೋ
ಜನ್ನ ಜನ್ಮಗಳ ಮೈತ್ರಿಯು
ನಮ್ಮೀ ಬಾಳ ಬಂಧನವು
ನಿನ್ನೆಯ ಕಹಿ ನಮಗೇಕೆ
ನಾಳಿನಾ ವ್ಯಥೆಯು ಬೇಕೆ
ಇಂದನು ಚಂದದಿ ಕಳೆವ
ನೆಮ್ಮದಿಗೆ ಇಲ್ಲ ಬರವು
ತ್ರಿನೇತ್ರಜ್.
(ಶಿವಕುಮಾರ. ಹಿರೇಮಠ)
Comments
Post a Comment