[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*