ಮಕ್ಕಳ ಗೀತೆ
*ಆನಂದನ ಗರ್ವಭಂಗ*
ಆಂಟಿಯ ಜೊತೆಗೆ ಪೇಟೆಗ್ಹೋಗಿ
ಬೆಲೂನು ತಂದನು ಆನಂದ
ಬೀದಿ ಮಕ್ಕಳ ಹೊಟ್ಟೆ ಉರಿಸಲು
ಅವನಿಗೆ ಅದೇನೋ ಆನಂದ
ಜಂಭದಿ ನಡೆದನು ಆಡುತ ಪುಗ್ಗೆಯ
ಡುಬ್ಡುಬ್ ಡುಬ್ ಟುಬ್ ಬಡಿಯುತ್ತ
ತನಗೆ ಸರಿಸಮ ಯಾರಿಲ್ಲೆಂದು
ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ.
ಅವನಾರ್ಭಟಕೆ ಬೀದಿಯ ನಾಯಿ
ಗುರುಗುಟ್ಟಿ ಎಗರಿತು ಬೌ ಎಂದು
ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು
ಬೊಬ್ಬಿಟ್ಟನು ಬೆದರಿ ಆನಂದು
ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ
ತೆಂಗಿನ ಗರಿಚುಚ್ಚಿ ಢಬ್ಬ್ ಅಂತು
ಮಕ್ಕಳೆಲ್ಲರೂ ಪಕಪಕ ನಕ್ಕರು
ಆನಂದನ ಜಂಭವು ಠ್ಠುಸ್ಸಂತು
........ ....... ...... .......
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ
*ಆನಂದನ ಗರ್ವಭಂಗ*
ಆಂಟಿಯ ಜೊತೆಗೆ ಪೇಟೆಗ್ಹೋಗಿ
ಬೆಲೂನು ತಂದನು ಆನಂದ
ಬೀದಿ ಮಕ್ಕಳ ಹೊಟ್ಟೆ ಉರಿಸಲು
ಅವನಿಗೆ ಅದೇನೋ ಆನಂದ
ಜಂಭದಿ ನಡೆದನು ಆಡುತ ಪುಗ್ಗೆಯ
ಡುಬ್ಡುಬ್ ಡುಬ್ ಟುಬ್ ಬಡಿಯುತ್ತ
ತನಗೆ ಸರಿಸಮ ಯಾರಿಲ್ಲೆಂದು
ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ.
ಅವನಾರ್ಭಟಕೆ ಬೀದಿಯ ನಾಯಿ
ಗುರುಗುಟ್ಟಿ ಎಗರಿತು ಬೌ ಎಂದು
ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು
ಬೊಬ್ಬಿಟ್ಟನು ಬೆದರಿ ಆನಂದು
ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ
ತೆಂಗಿನ ಗರಿಚುಚ್ಚಿ ಢಬ್ಬ್ ಅಂತು
ಮಕ್ಕಳೆಲ್ಲರೂ ಪಕಪಕ ನಕ್ಕರು
ಆನಂದನ ಜಂಭವು ಠ್ಠುಸ್ಸಂತು
........ ....... ...... .......
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ
Comments
Post a Comment