* ಬೇಡಿಕೆ * ಹಾಡಾಗಲು ಹಂಬಲಿಸುವ ಪದಗಳಿಗೆ ದನಿ ಬೇಕಿದೆ ಹೊಸ ಪಲ್ಲವಿ ನವ ಭಾವಕೆ ಸಹಯೋಗ ರಾಗ ಬೇಕಿದೆ||ಪ|| ಮನದ ನೋವು ಕಕ್ಕುವ ಕಹಿ ಭಾವದ ಪದಗಳಿವೆ ಕಾಲ್ತುಳಿತಕೆ ಘಾಸಿಗೊಂಡ ರಕ್ತಸಿಕ್ತವಾದ ಪದಗಳಿವೆ ದೌರ್ಜನ್ಯವ ಜಗದಗಲಕು ಸಾರಿ ಸಾರಿ ಹೇಳಬೇಕಿದೆ||೧|| ಪ್ರೀತಿ ಕಾಣದೆ ಸೊರಗಿಹ ಭಾವ ವಿಹೀನ ಪದಗಳಿವೆ ಭೇದ ಭಾವಕೆ ನೊಂದಿಹ ಬೆಂದಿಹೋದ ಪದಗಳಿವೆ ಅವಿವೇಕದ ಭ್ರಾಂತಿಯನ್ನ ಅಳಿಸಹಾಕಲೇಬೇಕಾಗಿದೆ ||೨|| ..... ..... ..... .... ..... ತ್ರಿನೇತ್ರಜ್.