Skip to main content

*ಅನುಪಮ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾವಗೀತೆ

        *ಅನುಪಮ*     
 
ಹೆಣ್ಣಾಗಿ ಮೂಡಿಹಳು
ಅದಮ್ಯ ಸೌಮ್ಯ ಶಕ್ತಿಯೇ
ಬಣ್ಣಿಸಲು ಅಸದಳವೊ
ಭಾವನಾ ಅಂಬುದಿಯೇ |ಪ|

ಮಗುವಾಗಿ ನಗುವಾಗಿ
ಅಮಿತ ಅನಿತೆ ಪೂಜಿತೆ
ಒಡಹುಟ್ಟಿದ ಜೀವಗಳಿಗೆ
ಮಿಡಿವ ಪ್ರೇಮ ಶೋಭಿತೆ|೧|

ಸ್ನೇಹ ತೋರಿ ಸಖಿಯಾಗಿ
ಹೃದಯಗೆದ್ದ ಅರಸಿಯಾಗಿ
ಬಾಳಿನ ಅರ್ಧಾಂಗಿಯಾಗಿ
ಬಾಳಿಸುವಳು ಗೃಹಿಣಿಯಾಗಿ|೨|

ಮನ ನಿನ್ನದು ಹೂವಂತೆ
ತನುವದೋ ಲತೆಯಂತೆ
ಬರಡನಳಿಸೊ ಸೆಲೆಯಂತೆ
ಮನೆಗೆ ನಂದಾ ದೀಪದಂತೆ |೩|

ಮಮತೆಗೆ ಮಾತೃರೂಪಿಣಿ
ಕ್ಷಮೆಗೆ ಭೂ ಸ್ವರೂಪಿಣಿ
ಜ್ಞಾನದೊಳು ಶ್ರೀ ವಾಣಿ
ನಮಿಸುವೆ ಸೃಷ್ಟಿಕಾರಿಣಿ |೪|
       .................
✍🏼 ತ್ರಿನೇತ್ರಜ


 ಶಿವಕುಮಾರ. ಹಿರೇಮಠ.

🥀🥀🥀🥀🥀

ಹನಿ ಹನಿಯ ತುಂತುರು
ಕಾವ್ಯ ಲೋಕದಲಿ...
ಮೈಮರೆಸುವ ಕವಿಹೃದಯಗಳ
ಕಾವ್ಯಗಳ ಸಾಗರ ದಲ್ಲಿ
ಮನವಿಂದು ಮಿಂದು
ಧನ್ಯವಾಗಿದೆ...

🦋🦋🦋🦋🦋🦋
*ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಯ ಫಲಿತಾಂಶಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಸುಸ್ವಾಗತ...*

 *ಈ ತಿಂಗಳ  ಸ್ಪರ್ಧೆಯ ವಿಷಯ*

*ಒಂದು ಹೆಣ್ಣು ಗಂಡಿನ ಜೀವನದಲ್ಲಿ ತಾಯಿಯಾಗಿ ತಂಗಿಯಾಗಿ ಮಡದಿಯಾಗಿ ಗೆಳತಿಯಾಗಿ ತಂಗಿಯಾಗಿ ಪ್ರೇಯಸಿಯಾಗಿ ಹೆಂಡತಿಯಾಗಿ ಗಂಡಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಜೀವಿತಾವದಿಯವರೆಗೆ ದುಡಿಯುತ್ತಾಳೆ ಅಂತಹ ಹೆಣ್ಣಿಗೆ ನಿಮ್ಮ ಭಾವಗೀತೆಯ ಮೂಲಕ ನಮನಗಳನ್ನು ಸಲ್ಲಿಸುವ ಒಂದು ಸಣ್ಣ ಪ್ರಯತ್ನ ಮಾಡಬಹುದಲ್ಲವೇ...*

ವಾರಗಳುರುಳಿ ಸ್ಪರ್ಧೆಯೂ ಮುಗಿದು ಫಲಿತಾಂಶದ ಅಂಚಿಗೆ ಬಂದು ನಿಂತಿದ್ದೇವೆ

*ಈ ತಿಂಗಳ ವಿಶೇಷ ಪ್ರಥಮ ಬಹುಮಾನವನ್ನು...*

ಸದಾ ಉತ್ಸಾಹಿ ನಗುನಗುತ್ತಲೆ
ಮನಮುಟ್ಟುವ ಸಹೃದಯಿ
ಸುಂದರ ಬರಹಗಳ ಒಡೆಯ..
ಶಬ್ದಸಾಗರವನ್ನೇ ತಲೆಯಲ್ಲಿಟ್ಟುಕೊಂಡ
ಗೆಳೆಯ ನಮ್ಮ ನಿಮ್ಮೆಲ್ಲರ ನೆಚ್ಚಿನ
ಸಾಹಿತಿ *ಶಿವಕುಮಾರ್ ಹಿರೇಮಠ* ಗುರುಗಳು ಪಡೆದುಕೊಂಡಿದ್ದಾರೆ...

ಅಭಿನಂದನೆಗಳು ಸರ್

*ಪ್ರಥಮ ಸ್ಥಾನ*

ಹನಿ ಹನಿ ತುಂತುರು ತಿಂಗಳ ವಿಶೇಷ ಸ್ಪರ್ಧೆಗೆ

        *ಅನುಪಮ*
ಹೆಣ್ಣಾಗಿ ಮೂಡಿಹಳು
ಅದಮ್ಯ ಸೌಮ್ಯ ಶಕ್ತಿಯೇ
ಬಣ್ಣಿಸಲು ಅಸದಳವೊ
ಭಾವನಾ ಅಂಬುದಿಯೇ |ಪ|

       .................
✍🏼 ತ್ರಿನೇತ್ರಜ

 ಶಿವಕುಮಾರ. ಹಿರೇಮಠ.
💐💐💐💐💐💐💐

ಇನ್ನೂ ದ್ವಿತೀಯ ಸ್ಥಾನವನ್ನು ಬಳಗದ ಉತ್ಸಾಯಿ ಸಾಹಿತಿ ಸುಂದರ ರಚನೆಗಳ ಮೂಲಕ ಎಲ್ಲರ ಮನಸೂರೆಕೊಂಡ ನಮ್ಮೆಲ್ಲರ ನೆಚ್ಚಿನ ಕವಯಿತ್ರಿ  *ಸುಧಾ ಮೇಡಂ* ಅಲಂಕರಿಸಿದ್ದಾರೆ

🌿🌿🌿🌿🌿🌿🌿🌿🌿🌿🌿🌿🌿🌿

*ತೀರ್ಪುಗಾರರಾಗಿ ಅತ್ಯುತ್ತಮ ಕಾರ್ಯ ನಿರ್ವಹಣೆ ಮಾಡಿದ...ತಿಂಗಳ ತೀರ್ಪುಗಾರರಾದ*

☘ *ಚಿನ್ನುಪ್ರಿಯ ಸರ್*

☘ *ಶಶಿರೇಖಾ ಮೇಡಂ*

☘ *ಅನಿಲ ಕುಲಕರ್ಣಿ*

ಇವರೆಲ್ಲರಿಗೂ ವಿಶೇಷ ಧನ್ಯವಾದಗಳು. ಹಾಗೂ ನನಗೆ ಇಂತಹ ಒಂದು ಅದ್ಭುತ ವೇದಿಕೆಯನ್ನು ಕಲ್ಪಿಸಿಕೊಟ್ಟ *ಖುಷಿ ಸರ್ ಮತ್ತು ಚಂದ್ರು ಸರ್ ಗೆ ಧನ್ಯವಾದಗಳು*

ಇನ್ನೊಮ್ಮೆ ವಿಜೇತರಿಗೆ ಅಭಿನಂದನೆಗಳು ಸಲ್ಲಿಸುತ್ತಾ ಮತ್ತೆ ಮುಂದಿನ ಸ್ಪರ್ಧೆಯಲ್ಲಿ ಭೇಟಿಯಾಗೊಣ ಧನ್ಯವಾದಗಳು....

*ವಿಶೇಷ ಸೂಚನೆ*

*ವಿಜೇತರು ತಮ್ಮ ವಿಳಾಸವನ್ನು ನನಗೆ ವೈಯಕ್ತಿಕವಾಗಿ ಕಳಿಸಿ ನಿಮ್ಮ ಬಹುಮಾನ ಆದಷ್ಟು ಬೇಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ*

🌱🌱🌱🌱🌱🌱🌱🌱🌱🌱🌱🌱🌱🌱

Comments

Popular posts from this blog

ರೈತ ಚೀತ್ಕಾರ

[09/04, 12:43 p.m.] ಭಾವಗೀತೆ * ರೈತ ಚೀತ್ಕಾರ * ಕನಸೇ ಕಮರಿಹೋಯಿತು ಬದುಕೇ ಬಾಡಿಹೋಯಿತು ರೈತನಾಗಿ ಹುಟ್ಟಬಾರದೋ ಮತ್ತೆ ರೈತನಾಗಿ ಹುಟ್ಟಬಾರದೋ||ಪ|| ಸಾಲ ಮಾಡಿ ಎತ್ತೊಂದ ತಂದೆ ಸಿಡಿಲು ಬಡಿದು ಸತ್ತಿತಲ್ಲೋ ದೇವ ನಿನ್ನ ಕರುಣೆ ಎಲ್ಲೊ ಜಂಘಾಬಲ ಉಡುಗಿತಲ್ಲೋ ನನ್ನ ಬಲವೆಲ್ಲ ಕುಸಿಯಿತಲ್ಲೋ||೧|| ಚಿನ್ನದ ಬೆಳೆಯು ನೂರಾಸೆ ತೋರಿ ಅತಿವೃಷ್ಟಿಗೆ ಸಿಲುಕಿತಲ್ಲೋ ಕೆಸರ ಸೇರಿ ಕೊಳೆಯಿತಲ್ಲೋ ಸಾಲ ದೆವ್ವವಾಯಿತಲ್ಲೋ ಕಣ್ಣಲಿ ನೆತ್ತಾರ ತಂದಿತಲ್ಲೋ ||೨|| ಆಳೋ ಜನಕೆ ಅಧಿಕಾರದಾಸೆ ಮತಕಾಗಿ ನೆನೆದುಬರುವರೋ ಪೊಳ್ಳು ಬರವಸೆಯ ತೂರಿಬಿಡುವರೋ ಉಳುವವನಿಗೆ ಆಸರೆ ಯಾರೋ ಯಮ ಕಿಂಕರರು ಬಂದು ನಿಂತರೋ||೩|| ✍ *ತ್ರಿನೇತ್ರಜ*

*ಆನಂದನ ಗರ್ವಭಂಗ*

ಮಕ್ಕಳ ಗೀತೆ  *ಆನಂದನ ಗರ್ವಭಂಗ*  ಆಂಟಿಯ ಜೊತೆಗೆ ಪೇಟೆಗ್ಹೋಗಿ ಬೆಲೂನು ತಂದನು ಆನಂದ ಬೀದಿ ಮಕ್ಕಳ ಹೊಟ್ಟೆ ಉರಿಸಲು ಅವನಿಗೆ ಅದೇನೋ ಆನಂದ ಜಂಭದಿ ನಡೆದನು ಆಡುತ ಪುಗ್ಗೆಯ ಡುಬ್ಡುಬ್ ಡುಬ್ ಟುಬ್ ಬಡಿಯುತ್ತ ತನಗೆ ಸರಿಸಮ ಯಾರಿಲ್ಲೆಂದು ಎರಡ್ಹೆಜ್ಜೆಗೆ ಒಂದ್ಸಾರಿ ನೆಗೆಯುತ್ತ. ಅವನಾರ್ಭಟಕೆ ಬೀದಿಯ ನಾಯಿ ಗುರುಗುಟ್ಟಿ ಎಗರಿತು ಬೌ ಎಂದು ಚಿಟ್ಟನೆ ಚೀರಿ ಕೈಬಿಟ್ಟು ಬೆಲೂನು ಬೊಬ್ಬಿಟ್ಟನು ಬೆದರಿ ಆನಂದು ಹಾರಿತು ಪುಗ್ಗೆಯು ಎತ್ತರೆತ್ತರಕ್ಕೆ ತೆಂಗಿನ ಗರಿಚುಚ್ಚಿ ಢಬ್ಬ್ ಅಂತು ಮಕ್ಕಳೆಲ್ಲರೂ ಪಕಪಕ ನಕ್ಕರು ಆನಂದನ ಜಂಭವು ಠ್ಠುಸ್ಸಂತು ........ ....... ...... ....... ✍🏼 ತ್ರಿನೇತ್ರಜ್ ಶಿವಕುಮಾರ. ಹಿರೇಮಠ