[03/04, 12:33 p.m.]
ಭಾವಗೀತೆ
*ಅವ್ಳಂದ್ರೆ ಪ್ರಾಣ*
ನಾ ಅವಳ್ನೆಷ್ಟು ಪಿರುತಿಸ್ತೀನಿ
ಅಂತಾ ಕೇಳ್ತಿಯಾ ದೋಸ್ತ
ಕೇಳ್ಕೊ ಹಾಡಲ್ಲೆ ಹೇಳ್ತೀನಿ
ಕೇಳಾಕು ಇರತೈತಿ ಮಸ್ತ ||ಪ||
ಅಂತಾ ಕೇಳ್ತಿಯಾ ದೋಸ್ತ
ಕೇಳ್ಕೊ ಹಾಡಲ್ಲೆ ಹೇಳ್ತೀನಿ
ಕೇಳಾಕು ಇರತೈತಿ ಮಸ್ತ ||ಪ||
ಜಾತಿ ಬ್ಯಾರೆ ಅಂತ ನಮ್ಮಪ್ಪ
ಬೈದು ಬುದ್ದಿ ಹೇಳ್ದ ಸಿಸ್ತ
ಅಕಿನ ಬೇಕಂದ್ರ ಆಸ್ತಿ ಪಾಸ್ತಿ
ಕೊಡುದಿಲ್ಲಂದ ಜಬರ್ದಸ್ತ
ಬೈದು ಬುದ್ದಿ ಹೇಳ್ದ ಸಿಸ್ತ
ಅಕಿನ ಬೇಕಂದ್ರ ಆಸ್ತಿ ಪಾಸ್ತಿ
ಕೊಡುದಿಲ್ಲಂದ ಜಬರ್ದಸ್ತ
ಅವ್ಳಗಾಗಿ ಎಲ್ಲಾ ಆಸ್ತಿನೇ ನಾ
ಬಿಟ್ಬಂದು ಬಿಟ್ಟೆ ನೋಡ ದೋಸ್ತ
ರಟ್ಟಿ ಮುರ್ದು ದುಡ್ದು ಬಾಳ್ತೀನಿ
ಎದೆ ನೆತ್ತರವ ಅವ್ಳಗಾಗಿ ಬಸ್ತ ||೧||
ಬಿಟ್ಬಂದು ಬಿಟ್ಟೆ ನೋಡ ದೋಸ್ತ
ರಟ್ಟಿ ಮುರ್ದು ದುಡ್ದು ಬಾಳ್ತೀನಿ
ಎದೆ ನೆತ್ತರವ ಅವ್ಳಗಾಗಿ ಬಸ್ತ ||೧||
ಜ್ವಾಳದ ತೆನೆಬಣ್ಣ ನನ್ನಾಕಿದು
ಬೆಣ್ಣಿಗಿಂತ ಮನ್ಸು ಮೆದು ಜಾಸ್ತಿ
ಮನ್ಸು ಕೊಟ್ಟೋಳೆ ಇನ್ನೇನ್ಬೇಕು
ಹಾಲ್ನಂತ ಅವ್ಳಪ್ರೇಮ ನನ್ನಾಸ್ತಿ
ಬೆಣ್ಣಿಗಿಂತ ಮನ್ಸು ಮೆದು ಜಾಸ್ತಿ
ಮನ್ಸು ಕೊಟ್ಟೋಳೆ ಇನ್ನೇನ್ಬೇಕು
ಹಾಲ್ನಂತ ಅವ್ಳಪ್ರೇಮ ನನ್ನಾಸ್ತಿ
ಬೆಟ್ದಸ್ಟು ಪಿರುತಿ ಐತೆ ಅವ್ಳಮ್ಯಾಲೆ
ಜೀವಕ್ಕಿಂತ ಹೆಚ್ಚಾಗವ್ಳೆ ದೊಸ್ತ
ರೆಪ್ಪೆಯಂಗೆ ಅವ್ಳ ಕಾಪಾಡ್ತೀನಿ
ಊರಿಗೂರೇ ನಮ್ನೋಡಿ ಸುಸ್ತ ||೨||
✍ ತ್ರಿನೇತ್ರಜ್
ಜೀವಕ್ಕಿಂತ ಹೆಚ್ಚಾಗವ್ಳೆ ದೊಸ್ತ
ರೆಪ್ಪೆಯಂಗೆ ಅವ್ಳ ಕಾಪಾಡ್ತೀನಿ
ಊರಿಗೂರೇ ನಮ್ನೋಡಿ ಸುಸ್ತ ||೨||
✍ ತ್ರಿನೇತ್ರಜ್
ಶಿವಕುಮಾರ. ಹಿರೇಮಠ.
Comments
Post a Comment