ತನ್ಮಯತೆ
ಮುರಳಿ ಲೋಲನ
ಸ್ನೇಹದ ಚಂದನ
ಪುಷ್ಪಾಲಂಕೃತ ಉದ್ಯಾನ|
ಶ್ಯಾಮನ ಸ್ಪಂದನ
ಪಾವನ ತನುಮನ
ಧನ್ಯವೊ ರಾಧಾ ಜೀವನ||ಪ||
ಚಲುವಿನ ಹೂಗಳ
ಚೆಲುವ ಮುಡಿಸಲು
ತನ್ಮಯ ಚೆಲ್ವೆಯ ಜೀವ|
ತರುಣಿ ಹೃದಯದ
ಪ್ರೇಮ ಕೊಳದೊಳು
ನೈದಿಲೆ ಅರಳಿದ ಭಾವ||೧||
ಕರ ದರ್ಪಣದೊಳು
ತನ್ನ ತಾ ನೋಡದೆ
ಸೆರೆಹಿಡಿದಳು ಮಾಧವನ|
ನೀಲ ವರ್ಣದ
ಶಶಿಯ ತೆರದಲಿ
ಕಂಡಿಹನು ಯದುನಂದನ||೨||
✍🏼 ತ್ರಿನೇತ್ರಜ್
ಶಿವಕುಮಾರ ಹಿರೇಮಠ

Comments
Post a Comment