*ಕಿವಿಮಾತು*
ಹುಟ್ಟಿದ ಮನೆಯ ಹೊಸಿಲು ನಮಿಸಿ
ಪತಿಯ ಮನೆಯೆಡೆ ಸಾಗಮ್ಮ
ಹುಟ್ಟಿದ ಮನೆಗೂ ಪತಿಯ ಮನೆಗೂ
ಅಮಿತ ಕೀರುತಿಯ ತಾರಮ್ಮ
ಹೆತ್ತವರ ನೆನೆಯುತ ಅತ್ತೆಯ ಮನೆಯಲಿ
ದುಃಖದ ಮೋರೆಯ ನೀನು ತೋರದಿರು
ಅತ್ತೆ ಮಾವರ ಮುಂದೆ ಮತ್ತೆ ಪತಿ ಮುಂದೆ
ಏರಿದ ದನಿಯನೆಂದೂ ತೆಗೆಯದಿರು
ಎಲ್ಲರಿಗೂ ಮುನ್ನ ನೀ ನಸುಕಲ್ಲೇ ಎದ್ದೇಳು
ಮುಚ್ಚಟೆಯಲಿ ಮನೆಯ ಕಾರ್ಯ ಮಾಡು
ಎಲ್ಲರಿಗೂ ಉಣಬಡಿಸಿ ಮಿಕ್ಕಷ್ಟನ್ನೆ ಉಂಡು
ಪತಿರಾಯ ಮಲಗಿದ ಮೇಲೆ ನಿದ್ದೆ ಮಾಡು
ನಾದಿನಿ ಮೈದುನರ ಮಕ್ಕಳೆಂದು ತಿಳಿದು
ತಪ್ಪುಗಳ ಹೊಟ್ಟೆಯಲಿಟ್ಟು ಮನ್ನಿಸಬೇಕು
ಎಲ್ಲರ ಏಳಿಗೆಗೂ ದೇವರ ಬೇಡಿಕೊಂಡು
ವರುಷಕ್ಕೇ ಮಡಿಲ ಮಗುವು ನಗಬೇಕು.
"""""""""" """"""""""
✍🏼 ತ್ರಿನೇತ್ರಜ
ಶಿವಕುಮಾರ ಹಿರೇಮಠ

Comments
Post a Comment