ಭಾವಗೀತೆ
*ಕಾಯಿಸದಿರು ಹೀಗೆ*
ಹೂವಿನ ನಗೆಯವಳೆ
ನನ್ನೆದೆಯ ಹೊಂಬಾಳೆ
ಸಂಜೆಯಾಯ್ತು ಬೇಗ ಬಾರೆ,
ವಿರಹವೇದನೆಯ ನಾ ತಾಳೆ.
ನಿನ್ನಲ್ಲಿ ಏನೋ ಸೆಳೆತ
ಬೇರೆಲ್ಲಿಯು ನಾ ಕಾಣೆ.
ಧಮನಿಯಲಿ ತುಂಬಿರವೆ
ಬಿಟ್ಟಿರೆನು ಆ ದೇವರಾಣೆ.
ಕೆಂಗುಲಾಬಿ ಕಾತರಿಸುತಿವೆ
ನಿನ್ನಂದವ ನೋಡಲು.
ಸುಗಂಧವದು ಹುಡುಕುತಿದೆ
ನನ್ನಂತೆಯೆ ನಿನ್ನ ಮೈ ಸೋಕಲು.
ಕ್ಷಣ ಕ್ಷಣವೂ ಯಗವಾಗಿ
ಉಸಿರಿದು ಭಾರವಾಗಿದೆ.
ಶಂಕೆಇಲ್ಲ ನಿನ್ನ ಪ್ರೇಮಕೆ
ಭರವಸೆಯು ನನಗಿದೆ.
ಅದೆಂತದೋ ತಳಮಳ
ಮನದ ಕೊಳವ ಕದಡಿದೆ.
ಕಂಗಳಲಿ ಆತಂಕ ತೂರಿ
ಚಿಂತೆಏಕೋ ಕಾಡುತಿದೆ.
*✍🏼 ತ್ರಿನೇತ್ರಜ.*
**********************
#################
ಭಾವಗೀತೆ
*ಕಾಯಿಸದಿರು ಹೀಗೆ*
ಹೂವಿನ ನಗೆಯವಳೆ
ನನ್ನೆದೆಯ ಹೊಂಬಾಳೆ
ಸಂಜೆಯಾಯ್ತು ಬಾರೆ,
ವೇದನೆಯ ನಾ ತಾಳೆ.
ಕೆಂಗುಲಾಬಿ ಕಾತರಿಸಿವೆ
ನಿನ್ನಂದವ ನೋಡಲು.
ಸುಗಂಧವದು ಹುಡುಕುತಿದೆ
ನಿನ್ನ ಮೈಯನು ಸೋಕಲು.
ನಿನ್ನಲ್ಲಿಹ ಏನೋ ಸೆಳೆತ
ಸಾಕು ಜಗವ ಮರೆಯಲು.
ಕ್ಷಣ ಕ್ಷಣವೂ ಯುಗವಾಗಿ
ಉಸಿರು ಭಾರವಾಗಿದೆ.
ಶಂಕೆಇಲ್ಲ ನಿನ್ನ ಪ್ರೇಮಕೆ
ಭರವಸೆಯು ನನಗಿದೆ.
ಅದೆಂತದೋ ತಳಮಳ
ಮನದ ಕೊಳವ ಕದಡಿದೆ.
*✍🏼 ತ್ರಿನೇತ್ರಜ.*
Comments
Post a Comment