*ಕಬ್ಬಿಗನೊಡಲು ಕಾವ್ಯಕಡಲು*
(ಯಾವ ಮೋಹನ ...ರಾಗದಲ್ಲಿ)
ಕಬ್ಬಿಗನೊಡಲು ಕಾವ್ಯಕಡಲು
ಸಾಹಿತ್ಯದ ರಸದೌತಣ.
ಭಾವ ಸಾಗರ ಅಲೆಯ ಉಕ್ಕಿಸೊ
ಕಾವ್ಯಗಳ ಸುಗ್ಗಿ ಕಣ.
ಸ್ಪರ್ಧೆಗಿಳಿಯುವ ರಚನೆಗಳಿಗೆ
ಬಳಗವಿದು ಕವಿ ಕಮ್ಮಟ.
ಅಂತರಾಳದ ನುಡಿಯ ಹೊಮ್ಮಿಸಿ
ಏರಿದೆ ಕನ್ನಡ ಬಾವುಟ.
ಕಾವ್ಯ ಮತ್ತು ವಿಮರ್ಶೆಗೆಂದು
ಜೊತೆಗೆ ಇದೆ ಸಹ ಬಳಗವು.
ರಚಿತ ಬರಹವ ನೀಡಿ ಓದಲು
ಸ್ವಾಗತ ಹಗಲೆಲ್ಲವು.
ವಿಮರ್ಶೆ ಘಟಕವು ರಾತ್ರಿ ತೆರೆವುದು ಅರಿತುಕೊಳ್ಳಲು ಕವಿಮನ.
ಅಂದವ ಮೆಚ್ಚಿ ದೋಷ ತೋರಿಸಿ
ಬೆಳೆಸಿ ಬೆಳೆಯುವ ವಿಧಾನ.
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
(ಯಾವ ಮೋಹನ ...ರಾಗದಲ್ಲಿ)
ಕಬ್ಬಿಗನೊಡಲು ಕಾವ್ಯಕಡಲು
ಸಾಹಿತ್ಯದ ರಸದೌತಣ.
ಭಾವ ಸಾಗರ ಅಲೆಯ ಉಕ್ಕಿಸೊ
ಕಾವ್ಯಗಳ ಸುಗ್ಗಿ ಕಣ.
ಸ್ಪರ್ಧೆಗಿಳಿಯುವ ರಚನೆಗಳಿಗೆ
ಬಳಗವಿದು ಕವಿ ಕಮ್ಮಟ.
ಅಂತರಾಳದ ನುಡಿಯ ಹೊಮ್ಮಿಸಿ
ಏರಿದೆ ಕನ್ನಡ ಬಾವುಟ.
ಕಾವ್ಯ ಮತ್ತು ವಿಮರ್ಶೆಗೆಂದು
ಜೊತೆಗೆ ಇದೆ ಸಹ ಬಳಗವು.
ರಚಿತ ಬರಹವ ನೀಡಿ ಓದಲು
ಸ್ವಾಗತ ಹಗಲೆಲ್ಲವು.
ವಿಮರ್ಶೆ ಘಟಕವು ರಾತ್ರಿ ತೆರೆವುದು ಅರಿತುಕೊಳ್ಳಲು ಕವಿಮನ.
ಅಂದವ ಮೆಚ್ಚಿ ದೋಷ ತೋರಿಸಿ
ಬೆಳೆಸಿ ಬೆಳೆಯುವ ವಿಧಾನ.
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
Comments
Post a Comment