ಭಾವಗೀತೆ
*ಸ್ನೇಹ ಬಂಧನ*
ಜೀವ ಜೀವವ ಬೆರೆಸಿ ಬೆಸೆಯುವ
ಸ್ನೇಹ ಅಮರ ಸ್ಪಂದನ.
ಮಿಡಿತ ತುಡಿತದ ಮಧುರಭಾವ
ಅದುವೆ ಸ್ನೇಹ ಬಂಧನ.
ಕೋಗಿಲೆಗೂ ಮಾಮರಕೂ
ಅವಿನಾಭಾವ ಸಮ್ಮಿಲನ.
ನದಿಗೂ ಕಡಲಿಗೂ ಅದೆಂದೋ
ಆಗಿದೆ ಬಿಡಿಸಲಾರದ ಗೆಳೆತನ.
ಆಸ್ತಿ-ಜಾತಿ, ಕೀರ್ತಿ-ಪ್ರೀತಿ
ಮೀರಿಹ ಕಂಪಿನ ಚಂದನ.•••೧
||ಅದುವೆ ಸ್ನೇಹ ಬಂಧನ.||
ಸ್ವಾರ್ಥವೆಂದೂ ಮೂಡಲಾರದು
ಭದ್ರ ಸ್ಹೇಹದ ಕೋಟೆಯೊಳು.
ಅಕಳಂಕಿತ ಬಾಳದೋಣಿಯು
ಮುಳುಗದು ಸ್ನೇಹದ ಕಡಲೊಳು.
ಲೋಕದ ನೀತಿ, ಪ್ರಾಣಭೀತಿಯ
ತೊಡೆದಿಹ ಭವ ಸಂಕಲನ•••೨
||ಅದುವೆ ಸ್ನೇಹ ಬಂಧನ||
~~~~~~~~~~~~~~~~
✍🏼 ತ್ರಿನೇತ್ರಜ.
*ಸ್ನೇಹ ಬಂಧನ*
ಜೀವ ಜೀವವ ಬೆರೆಸಿ ಬೆಸೆಯುವ
ಸ್ನೇಹ ಅಮರ ಸ್ಪಂದನ.
ಮಿಡಿತ ತುಡಿತದ ಮಧುರಭಾವ
ಅದುವೆ ಸ್ನೇಹ ಬಂಧನ.
ಕೋಗಿಲೆಗೂ ಮಾಮರಕೂ
ಅವಿನಾಭಾವ ಸಮ್ಮಿಲನ.
ನದಿಗೂ ಕಡಲಿಗೂ ಅದೆಂದೋ
ಆಗಿದೆ ಬಿಡಿಸಲಾರದ ಗೆಳೆತನ.
ಆಸ್ತಿ-ಜಾತಿ, ಕೀರ್ತಿ-ಪ್ರೀತಿ
ಮೀರಿಹ ಕಂಪಿನ ಚಂದನ.•••೧
||ಅದುವೆ ಸ್ನೇಹ ಬಂಧನ.||
ಸ್ವಾರ್ಥವೆಂದೂ ಮೂಡಲಾರದು
ಭದ್ರ ಸ್ಹೇಹದ ಕೋಟೆಯೊಳು.
ಅಕಳಂಕಿತ ಬಾಳದೋಣಿಯು
ಮುಳುಗದು ಸ್ನೇಹದ ಕಡಲೊಳು.
ಲೋಕದ ನೀತಿ, ಪ್ರಾಣಭೀತಿಯ
ತೊಡೆದಿಹ ಭವ ಸಂಕಲನ•••೨
||ಅದುವೆ ಸ್ನೇಹ ಬಂಧನ||
~~~~~~~~~~~~~~~~
✍🏼 ತ್ರಿನೇತ್ರಜ.
Comments
Post a Comment