ಭಾವಗೀತೆ
*ವಿದುರದ್ವಂದ್ವ*
ದೂರ ಹೋಗು ಸೋಮ
ದೂಡಿಬಿಡು ನಿಯಮ
ದುಗುಡು ತಂದಿದೆ ಬೆಳದಿಂಗಳಿಂದು
ದುಃಖದುಬ್ಬರ ಪೂರ್ಣಿಮೆಯಂದು
ಮದಿರೆ ಮಾತ್ರ
ಮಧುರವಾಯ್ತು
ಮನದನ್ನೆಯ ಆ ನೆನಪಿಗೆ
ಮರಣವೆ ಮನಕೆ
ಮಂತ್ರವಾಯ್ತು
ಮಡದಿ ಇರದೀ ಬದುಕಿಗೆ
ಮರೆಯಾಯಿತು ಮುತ್ತು
ಮಸಣ ಸೇರಿತು ಮಾತು||೧||
ತೋರದೆ ಮುಖ
ತೋಳ್ಬೆಸುಗೆಯ ಹಿತ
ತೊಳಲಾಟ ತಂದಳೇತಕೋ?
ತೋರದೆ ಕರುಣೆ
ತೊರೆದು ತಣ್ಣಗೆ
ತೋರಿದಳು ಬೆನ್ನನೇತಕೋ?
ತೊರೆಯಲೆ ಬದುಕು?
ತೋಚದಾಯ್ತೆ ದಿಕ್ಕು.||೨||
ಕಣ್ಣಿಗೆ ಕಾಣದ
ಕನಸಿಗೆ ನಿಲುಕದ
ಕತ್ತಲೆದಾರಿಯ ಊರಿಗೆ
ಕಲ್ಲು ಮನಸ್ಸಿನ
ಕಟುಕನಾಗಲು
ಕಂದನಾಗಿಹ ತಡೆ ಎನಗೆ
ಕರಪಿಡಿದವಳ ಸೇರಲೆ?
ಕಂಪನವ ಸಹಿಸಲೇ?||೩||
---- ---- ----- ----
✍🏼 ತ್ರಿನೇತ್ರಜ
ಶಿವಕುಮಾರ ಹಿರೇಮಠ.
*ವಿದುರದ್ವಂದ್ವ*
ದೂರ ಹೋಗು ಸೋಮ
ದೂಡಿಬಿಡು ನಿಯಮ
ದುಗುಡು ತಂದಿದೆ ಬೆಳದಿಂಗಳಿಂದು
ದುಃಖದುಬ್ಬರ ಪೂರ್ಣಿಮೆಯಂದು
ಮದಿರೆ ಮಾತ್ರ
ಮಧುರವಾಯ್ತು
ಮನದನ್ನೆಯ ಆ ನೆನಪಿಗೆ
ಮರಣವೆ ಮನಕೆ
ಮಂತ್ರವಾಯ್ತು
ಮಡದಿ ಇರದೀ ಬದುಕಿಗೆ
ಮರೆಯಾಯಿತು ಮುತ್ತು
ಮಸಣ ಸೇರಿತು ಮಾತು||೧||
ತೋರದೆ ಮುಖ
ತೋಳ್ಬೆಸುಗೆಯ ಹಿತ
ತೊಳಲಾಟ ತಂದಳೇತಕೋ?
ತೋರದೆ ಕರುಣೆ
ತೊರೆದು ತಣ್ಣಗೆ
ತೋರಿದಳು ಬೆನ್ನನೇತಕೋ?
ತೊರೆಯಲೆ ಬದುಕು?
ತೋಚದಾಯ್ತೆ ದಿಕ್ಕು.||೨||
ಕಣ್ಣಿಗೆ ಕಾಣದ
ಕನಸಿಗೆ ನಿಲುಕದ
ಕತ್ತಲೆದಾರಿಯ ಊರಿಗೆ
ಕಲ್ಲು ಮನಸ್ಸಿನ
ಕಟುಕನಾಗಲು
ಕಂದನಾಗಿಹ ತಡೆ ಎನಗೆ
ಕರಪಿಡಿದವಳ ಸೇರಲೆ?
ಕಂಪನವ ಸಹಿಸಲೇ?||೩||
---- ---- ----- ----
✍🏼 ತ್ರಿನೇತ್ರಜ
ಶಿವಕುಮಾರ ಹಿರೇಮಠ.
Comments
Post a Comment