ಭಾವಗೀತೆ
*ಸಂಭವ*
ಆಸೆಬೆನ್ನ ಬಿದ್ದರೆಂತು
ತೃಪ್ತಿ ಸಿಗುವುದು.
ಮೋಸವಿಲ್ಲದ ಪ್ರೀತಿ
ಹರುಷ ತರುವುದು.
ಬೇಡವೊ ದುರಾಸೆ
ಬಾರದುದನು ಆಶಿಸೆ
ನೋಯುವೆ ಮನಸೆ
ಬಾಡುವ ಮೈ ಬಣ್ಣಕೆ
ಮನ ಬಾಗುವುದೇಕೋ.
ಬತ್ತದಿರೊ ಮನದ ಗುಣವ
ಮರೆಯುವುದೇತಕೋ.
ಹರುಷ ಹುಡುಕಿ ದುಡುಕಿ
ನೋವ ಪಡೆವುದೇತಕೋ.
ಚಿಂತೆ ಎಂಬ ಚಿತೆಯನೇರಿ
ಮಡಿಯುವುದೇತಕೋ.
ಮನಸುಗಳು ಬೆರೆಯದಿರೆ
ಸರಸವು ಬರದು.
ಇಲ್ಲದುದನು ನೆನೆಯುತಿರೆ
ಹರುಷವೆ ಇರದು.
ನಾಳೆ ಅರಿಯದೆ ನೂರು
ಬಯಕೆ ಕೂಡದು.
ಮಿತವೆ ಹಿತವು ಆದರೇನೆ
ಸುಖವು ದೊರೆವುದು.
✍🏼 ತ್ರಿನೇತ್ರಜ್
ಶಿವಕುಮಾರ ಹಿರೇಮಠ
೯೯೪೫೯೧೫೭೮೦
Comments
Post a Comment