*ದಿವ್ಯಾಂಗರ ಮನದಿಂದ*
.... .... .... .... ..... ..... ....
ಮನನೊಂದು ಹಾಡಿಹೆವು ಈ .
ಕೇಳುವಿರಿ ನೀವೆಂದು ಭಾವಿಸಿಹೆವು.|ಪ|
ಕಣ್ಣಿಲ್ಲ ,ಕಿವಿ ಇಲ್ಲ ,ಕೈಯಿಲ್ಲ, ಕಾಲಿಲ್ಲ;
ಎಂಬ ನೋವು ಎಮಗೆ ಎನಿತು ಇಲ್ಲ.
ಸೃಷ್ಟಿಕರ್ತನ ಬಯಕೆ, ಇಷ್ಟೇ ಸಾಕೆಮಗೆ.|೧|
ಬೇಸರವಿದೆ ಮನಕೆ ನಿಮ್ಮ ನೋಟಗಳಿಂದ,
ನೋವಾಗುವುದೆಮಗೆ ಕುಹಕ ನುಡಿಯಿಂದ.
ಬೇಡೆಮಗೆ ಅನುಕಂಪ, ಮನವಿ ಇದು ನಮ್ಮಿಂದ;
ಅವಕಾಶಗಳ ನಮಗೆ ಕೊಟ್ಟು ನೋಡಿ.
ಸಾಧಿಸುವೆವು ನಿಮ್ಮಂತೆ ಕಾರ್ಯ ಮಾಡಿ.|೨|
.... ... ... .... .... ... .....
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.
*****************************
##########################
ಶೀರ್ಷಿಕೆ : *ದಿವ್ಯಾಂಗರು ದೇವರ ಮಕ್ಕಳು*
ಕವಿ: ತ್ರಿನೇತ್ರಜ.
(ಶಿವಕುಮಾರ. ಹಿರೇಮಠ)
ಪ್ರಕಾರ: ಭಾವಗೀತೆ.
ಭಾಷೆ: ಕನ್ನಡ.
.... .... .... .... ..... ..... ....
ಮನನೊಂದು ಹಾಡಿದೆನು ಈ ಹಾಡನು.
ಕೇಳುವಿರಿ ನೀವೆಂದು ಭಾವಿಸುವೆನು.
||ಮನನೊಂದು||
ಕಣ್ಣಿಲ್ಲ ,ಕಿವಿಯಿಲ್ಲ ,ಕೈಯಿಲ್ಲ,
ಕಾಲಿಲ್ಲ;
ಎಂಬ ನೋವು ದೇವರ
ಮಕ್ಕಳಿಗಿಲ್ಲ--(೨)
ಸೃಷ್ಟಿಕರ್ತನ ಬಯಕೆ,ಸ್ವೀಕರಿಸಿಹರೆಲ್ಲ.
||ಮನನೊಂದು||
ಬೇಸರವಿದೆ ಮನಕೆ ನಿಮ್ಮ
ನೋಟಗಳಿಂದ,
ನೋವಾಗುವುದು ಎದೆಗೆ
ಕುಹಕ ನುಡಿಯಿಂದ--(೨)
ಬೇಡ ನಿಮ್ಮ ಅನುಕಂಪ, ಮನವಿ ಇದು
ನನ್ನಿಂದ;
ಅವಕಾಶಗಳನ್ನವರಿಗೆ ಕೊಟ್ಟು ನೋಡಿ.
ಸಾಧಿಸುವರು ನಿಮ್ಮಂತೆ--೨
ಕಾರ್ಯ ಮಾಡಿ. ||ಮನನೊಂದು||
.... ... ... .... .... ... .....
*..✍🏼 ತ್ರಿನೇತ್ರಜ.*
_ಶಿವಕುಮಾರ್ ಹಿರೇಮಠ_
Comments
Post a Comment