ಭಾವಗೀತೆ
*ಜೀವನ ಜೀವ*
ಸಿರಿತನದ ಚಿಂತೆಯಿಲ್ಲ
ಜೊತೆಗಿರಲು ನೀ ಪ್ರಿಯೆ.
ಬಡತನವೆ ಬೇವು ಬೆಲ್ಲ
ದಿನದಿನವು ಯುಗಾದಿಯೆ.|ಪ|
ನಿನ್ನ ಹೃದಯವೆ ಎನಗೈಸಿರಿಯು.
ಒಲವು ಬತ್ತದ ಜೀವ ನದಿಯು.
ಸದ್ಗುಣಗಳೆ ನಿನ್ನಯ ಒಡವೆ.
ತೋಳಲಪ್ಪಿ ನಾ ಕಾಪಾಡುವೆ.|೧|
ಉಂಡುಡಲಿಹುದು ಮೂರ್ಹೊತ್ತು.
ಹೊಕ್ಕಳ ಕುಡಿಗಳೆ ಸಂಪತ್ತು.
ಪ್ರೀತಿಯೆ ಬದುಕಿನ ಗಮ್ಮತ್ತು.
ತಡೆಯಾಗದು ವಯ ಯಾವತ್ತೂ. |೨|
ನೀನೆ ನನ್ನಯ ಜೀವನ ಜೀವ.
ಸಮಹೊತ್ತಿರುವೆ ನಲಿವು ನೋವ.
ನೂರು ಜನ್ಮಕು ನೀಡಿ ಮನವ
ಎದೆಯಲಿ ಬಚ್ಚಿಡು ಗೆಲ್ಲುವೆ ಸಾವ. |೩|
ತ್ರಿನೇತ್ರಜ
ಶಿವಕುಮಾರ. ಹಿರೇಮಠ.
*ಜೀವನ ಜೀವ*
ಸಿರಿತನದ ಚಿಂತೆಯಿಲ್ಲ
ಜೊತೆಗಿರಲು ನೀ ಪ್ರಿಯೆ.
ಬಡತನವೆ ಬೇವು ಬೆಲ್ಲ
ದಿನದಿನವು ಯುಗಾದಿಯೆ.|ಪ|
ನಿನ್ನ ಹೃದಯವೆ ಎನಗೈಸಿರಿಯು.
ಒಲವು ಬತ್ತದ ಜೀವ ನದಿಯು.
ಸದ್ಗುಣಗಳೆ ನಿನ್ನಯ ಒಡವೆ.
ತೋಳಲಪ್ಪಿ ನಾ ಕಾಪಾಡುವೆ.|೧|
ಉಂಡುಡಲಿಹುದು ಮೂರ್ಹೊತ್ತು.
ಹೊಕ್ಕಳ ಕುಡಿಗಳೆ ಸಂಪತ್ತು.
ಪ್ರೀತಿಯೆ ಬದುಕಿನ ಗಮ್ಮತ್ತು.
ತಡೆಯಾಗದು ವಯ ಯಾವತ್ತೂ. |೨|
ನೀನೆ ನನ್ನಯ ಜೀವನ ಜೀವ.
ಸಮಹೊತ್ತಿರುವೆ ನಲಿವು ನೋವ.
ನೂರು ಜನ್ಮಕು ನೀಡಿ ಮನವ
ಎದೆಯಲಿ ಬಚ್ಚಿಡು ಗೆಲ್ಲುವೆ ಸಾವ. |೩|
ತ್ರಿನೇತ್ರಜ
ಶಿವಕುಮಾರ. ಹಿರೇಮಠ.
Comments
Post a Comment