*ಮುಸ್ಸಂಜೆಯಾದಾಗ*
ಮರಳಿದವು ಬಾನಾಡಿಗಳು
ಮರಳಿದವದೋ ಗೋವುಗಳು
ಮುಳುಗುತಿಹನು ರವಿ ಕೂಡ
ಮುಸ್ಸಂಜೆಯಾಯಿತು ನೋಡ|ಪ|
ಬಾನಗನ್ನಡಿಯಲಿ ಸಂಧ್ಯಾ
ಸಿಂಗಾರವ ತೋರಿದಳು.
ಇನಿಯ ಬಂದೊಡನೆ ನಸು
ನಾಚುತ್ತ ಕೆಂಪಾಗಿಹಳು.|೧|
ಬೆಳ್ಳಿ ಬಿಂದಿಯನು ಹಣೆಗೆ
ಬೊಟ್ಟಂತೆ ಇಟ್ಟು ನಿಂತಳು
ಹೊಳೆವ ಮೊಗ್ಗುಗಳ ತನ್ನ
ಮುಡಿಗೇರಿಸಿ ನಸುನಕ್ಕಳು|೨|
ಇರುಳ ಹೆರಳನು ಹರಡುತ್ತ
ಇಳೆಯ ಕಳೆಯ ಕದ್ದಿಹಳು.
ಕಡುಗಪ್ಪನೆ ಸೆರಗ ಬೀಸುತ್ತ
ತೋರ್ಬೆರಳ ತೋರಿಹಳು.|೩|
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
Comments
Post a Comment