ಜಾನಪದ ಶೈಲಿ ಗೀತೆ
*ದುಡಿಮೆಯೆ ಬದುಕು*
ದೆವ್ರ ಕೊಟ್ಟಾನ್ರೀ ನಮಗ
ದುಡಿಯಾಕಂತ ಈ ಜಲ್ಮ
ಬೆವ್ರ ಸುರ್ಸಿ ಬೆಳಿಯ ಬೆಳಿತೀವೋ||
ಲೋಕಕೆಲ್ಲ
ಹೊಟ್ಟಿತುಂಬ ಅನ್ನ ಕೊಡತೀವೊ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ಬೆಳ್ಳಿಚುಕ್ಕಿ ಮೂಡುದುಕ
ಹಟ್ಟಿಹುಂಜ ಕೂಗುದಕ
ಹೊತ್ತಾರೆದ್ದು ಹೆಂಡಿಕಸ ಬಳದ್ಹಾಕಿ||
ನ್ಯಾರಿಮಾಡಿ
ಬಸವನಕೂಡ ಹೊಲಕ ಹೋಗತೇವೋ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ಭೂತಾಯಿ ಮಡ್ಲಾಗ
ಮೈಯ ಬಗ್ಗಿಸಿ ದಗದಾ ಮಾಡಿ
ಬಂಗಾರದಂತ ಫಸಲ ಪಡದೇವೋ||
ಸುಗ್ಗಿಮಾಡಿ
ಮನಿಗೆ ರಾಶಿ ಹೇರಕೊಂಡ ಬರತೇವೋ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ಕೋಟಿ ವಿದ್ಯಗಿಂತ ನಮ್ಮ
ಮೇಟಿ ವಿದ್ಯ ಮೇಲಂತ
ಹಿರಿಯರು ಹೇಳಿದ್ದು ಸುಳ್ಳಲ್ಲ||
ದುಡಿಲಾರ್ದ
ಕುಂತು ತಿಂದ್ರ ಕಡುಕಿ ಹೊನ್ನು ಸಾಲಲ್ಲ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ತ್ರಿನೇತ್ರಜ್
ಶಿವಕುಮಾರ .ಹಿರೇಮಠ.
*ದುಡಿಮೆಯೆ ಬದುಕು*
ದೆವ್ರ ಕೊಟ್ಟಾನ್ರೀ ನಮಗ
ದುಡಿಯಾಕಂತ ಈ ಜಲ್ಮ
ಬೆವ್ರ ಸುರ್ಸಿ ಬೆಳಿಯ ಬೆಳಿತೀವೋ||
ಲೋಕಕೆಲ್ಲ
ಹೊಟ್ಟಿತುಂಬ ಅನ್ನ ಕೊಡತೀವೊ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ಬೆಳ್ಳಿಚುಕ್ಕಿ ಮೂಡುದುಕ
ಹಟ್ಟಿಹುಂಜ ಕೂಗುದಕ
ಹೊತ್ತಾರೆದ್ದು ಹೆಂಡಿಕಸ ಬಳದ್ಹಾಕಿ||
ನ್ಯಾರಿಮಾಡಿ
ಬಸವನಕೂಡ ಹೊಲಕ ಹೋಗತೇವೋ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ಭೂತಾಯಿ ಮಡ್ಲಾಗ
ಮೈಯ ಬಗ್ಗಿಸಿ ದಗದಾ ಮಾಡಿ
ಬಂಗಾರದಂತ ಫಸಲ ಪಡದೇವೋ||
ಸುಗ್ಗಿಮಾಡಿ
ಮನಿಗೆ ರಾಶಿ ಹೇರಕೊಂಡ ಬರತೇವೋ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ಕೋಟಿ ವಿದ್ಯಗಿಂತ ನಮ್ಮ
ಮೇಟಿ ವಿದ್ಯ ಮೇಲಂತ
ಹಿರಿಯರು ಹೇಳಿದ್ದು ಸುಳ್ಳಲ್ಲ||
ದುಡಿಲಾರ್ದ
ಕುಂತು ತಿಂದ್ರ ಕಡುಕಿ ಹೊನ್ನು ಸಾಲಲ್ಲ.
|ಜಕ್ ನಕ ನಕ ಜಕ(೩)
ಜಕ್ ನಕ ನ|
ತ್ರಿನೇತ್ರಜ್
ಶಿವಕುಮಾರ .ಹಿರೇಮಠ.
Comments
Post a Comment