ಭಾವಗೀತೆ
ಶಿವಪಾರ್ವತಿಯರ ಶೃಂಗಾರ
ಶಂಕರ ಶಿವೆಯರ ಶೃಂಗಾರ ಕಾವ್ಯ.
ಜಗಕೆಲ್ಲ ಸಾರಿತು ಪ್ರೇಮ ಭವ್ಯ.
ಕಲ್ಪಿಸೊ ಕಂಗಳಿಗೆ ರಸವಿದು ದಿವ್ಯ.
ಕೈಲಾಸವಾಯಿತು ಪರಮ ನವ್ಯ.
ಪಂದ್ಯದಿ ಸೋತನು ಪರಮಶಿವ.
ಚಂದ್ರನೆಡೆ ಚಾಚೆ ಉಮೆ ಕರವ.
ಕೋಮಲಾಂಗಿ ಕುಚತಾಗಿ
ಕನಲಿದನು ಶಶಿಧರ.
ನಡುಬಳಸಿ ಚುಂಬಿಸಿದ
ಅರ್ಧಾಂಗಿಯ ಅಧರ.
ಉನ್ಮಾದತಂತು ಪ್ರಣಯ ಲೀಲೆ.
ರೋಮಾಂಚನವೀವ ಸೃಷ್ಟಿ ಕಲೆ.
ಬಿಸಿಯುಸಿರಿಗೆ ಕರಗಿತು
ಶಿಖರದ ಹಿಮಮಾಲೆ.
ತ್ರಿಲೋಕವೆ ಆಡಿಹುದು
ಲಾಸ್ಯಮಯ ಉಯ್ಯಾಲೆ.
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
ಶಿವ-ಪಾರ್ವತಿಯರ ಶೃಂಗಾರ
[13/02, 9:55 p.m.]
ಶಂಕರ ಶಿವೆಯರ
ಶೃಂಗಾರ ಕಾವ್ಯ.
ಜಗಕೆಲ್ಲ ಸಾರಿತು
ಪ್ರೇಮ ಭವ್ಯ.
ನೀಲಕಂಠ ಹರಿಸಿದ
ಪ್ರೇಮಸೆಲೆ
ಎದೆಗೊರಗಿ ಪರವಶದಿ
ಕರಗಿದಳು ಕೋಮಲೆ
ಬಿಸಿಯುಸಿರಿಗೆ ಕರಗಿತು
ಶಿಖರದ ಹಿಮಮಾಲೆ.
ತ್ರಿಲೋಕವೆ ಆಡಿಹುದು
ಲಾಸ್ಯಮಯ ಉಯ್ಯಾಲೆ.
ಉನ್ಮಾದತಂತು ಸತಿ ಪತಿ
ಪ್ರಣಯ ಲೀಲೆ.
ರೋಮಾಂಚ ನೀಡುವ
ಸೃಷ್ಟಿಯ ಕಲೆ.
ಕಲ್ಪಿಸೊ ಕಂಗಳಿಗೆ ರಸವಿದು ದಿವ್ಯ.
ಕೈಲಾಸವಾಯಿತು
ಪರಮ ನವ್ಯ.
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
Comments
Post a Comment