ಭಾವಗೀತೆ
*ಹರೆಯಾಗಮನ*
ಏನಿದು ಭಾವ ಎಂಥ ಮೋಹ
ತುಂಬಿ ಬಂದ ಹರೆಯಕೆ
ಏನೋ ಸೆಳೆತ ಎಂಥ ಸೋಜಿಗ
ನವನವೀನ ಜೀವಕೆ ||ಪ||
ಸದಾ ಮನ ತೇಲುವುದು
ಕಲ್ಪನಾ ಮುಗಿಲಲಿ
ಕದಡಿ ಭಾವ ವಿರಹದಲಿ
ತಾಪವೇರಿದೆ ತನುವಲಿ
ಮಾತು ಕೇಳದು ನೆಲ ಕಾಣದು
ಕನಸ ಲಹರಿ ಕಣ್ಣಲಿ
ಮೈಮರೆವ ವಿಹಂಗಮ
ರೋಮಾಂಚನದಾಸೆಯಲಿ||೧||
ಕನ್ನಡಿಯೂ ನಾಚುವಂತೆ
ತಾಳ್ಮೆಯ ಸಿಂಗಾರವು
ನೂರಾಸೆ ತುಂಬಿ ತುಂಬಿ
ಮನವಿದೋ ಭಾರವು
ನೆರೆಗೆ ಸಿಕ್ಕ ಹಾವಿನಂತೆ
ತೀರದ ತೊಳಲಾಟವು
ಸುಳಿಗೆ ಸಿಕ್ಕ ನಾವಿನಂತೆ
ಎತ್ತಲೆತ್ತಲೋ ಸೆಳೆತವು.
||೨||
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ
*ಹರೆಯಾಗಮನ*
ಏನಿದು ಭಾವ ಎಂಥ ಮೋಹ
ತುಂಬಿ ಬಂದ ಹರೆಯಕೆ
ಏನೋ ಸೆಳೆತ ಎಂಥ ಸೋಜಿಗ
ನವನವೀನ ಜೀವಕೆ ||ಪ||
ಸದಾ ಮನ ತೇಲುವುದು
ಕಲ್ಪನಾ ಮುಗಿಲಲಿ
ಕದಡಿ ಭಾವ ವಿರಹದಲಿ
ತಾಪವೇರಿದೆ ತನುವಲಿ
ಮಾತು ಕೇಳದು ನೆಲ ಕಾಣದು
ಕನಸ ಲಹರಿ ಕಣ್ಣಲಿ
ಮೈಮರೆವ ವಿಹಂಗಮ
ರೋಮಾಂಚನದಾಸೆಯಲಿ||೧||
ಕನ್ನಡಿಯೂ ನಾಚುವಂತೆ
ತಾಳ್ಮೆಯ ಸಿಂಗಾರವು
ನೂರಾಸೆ ತುಂಬಿ ತುಂಬಿ
ಮನವಿದೋ ಭಾರವು
ನೆರೆಗೆ ಸಿಕ್ಕ ಹಾವಿನಂತೆ
ತೀರದ ತೊಳಲಾಟವು
ಸುಳಿಗೆ ಸಿಕ್ಕ ನಾವಿನಂತೆ
ಎತ್ತಲೆತ್ತಲೋ ಸೆಳೆತವು.
||೨||
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ
Comments
Post a Comment