ಭಾವಗೀತೆ
*ದಾಸನಾದೆ ಅಂದಕೆ*
ನನ್ನ ಕಲ್ಪನೆಯಲ್ಲಿ
ಬಂತೊಂದು ಲೋಕ
ನೀನದರ ಒಡತಿ
ನಾನು ನಿನ್ನ ಸೇವಕ ||ಪ||
ಹಂಸ ತೂಲಿಕಾತಲ್ಪದಿ
ಚಂದ್ರಕಾಂತಿಯ ಧರಿಸಿ
ನೀ ಪವಡಿಸಿರೆ ನಗುತ
ಹಾಡಿ ತೂಗುವೆ ಅರಸಿ
ಗಾನದೊಳು ಮೈ ಮರೆಸಿ
ಆಡಿಸುವೆ ಕನಸ ಬಿತ್ತರಿಸಿ||೧||
ಶ್ವೇತ ಸಾಗರ ವದನದಿ
ಮತ್ಸ್ಯಕಂಗಳನಾಡಿಸಿ
ಮಂದಸ್ಮಿತ ಬೀರುವೆ
ಮಧುವಧರ ಅರಳಿಸಿ
ವೈಯ್ಯಾರದಲೆನ್ನ ಸೋಲಿಸಿ
ದಾಸನಾಗಿಸಿಹಳೆನ್ನ ಸರಸಿ||೨||
**** **** **** ****
✍🏼.. ತ್ರಿನೇತ್ರಜ್
ಶಿವಕುಮಾರ. ಹಿರೇಮಠ
*ದಾಸನಾದೆ ಅಂದಕೆ*
ನನ್ನ ಕಲ್ಪನೆಯಲ್ಲಿ
ಬಂತೊಂದು ಲೋಕ
ನೀನದರ ಒಡತಿ
ನಾನು ನಿನ್ನ ಸೇವಕ ||ಪ||
ಹಂಸ ತೂಲಿಕಾತಲ್ಪದಿ
ಚಂದ್ರಕಾಂತಿಯ ಧರಿಸಿ
ನೀ ಪವಡಿಸಿರೆ ನಗುತ
ಹಾಡಿ ತೂಗುವೆ ಅರಸಿ
ಗಾನದೊಳು ಮೈ ಮರೆಸಿ
ಆಡಿಸುವೆ ಕನಸ ಬಿತ್ತರಿಸಿ||೧||
ಶ್ವೇತ ಸಾಗರ ವದನದಿ
ಮತ್ಸ್ಯಕಂಗಳನಾಡಿಸಿ
ಮಂದಸ್ಮಿತ ಬೀರುವೆ
ಮಧುವಧರ ಅರಳಿಸಿ
ವೈಯ್ಯಾರದಲೆನ್ನ ಸೋಲಿಸಿ
ದಾಸನಾಗಿಸಿಹಳೆನ್ನ ಸರಸಿ||೨||
**** **** **** ****
✍🏼.. ತ್ರಿನೇತ್ರಜ್
ಶಿವಕುಮಾರ. ಹಿರೇಮಠ
Comments
Post a Comment