ಜಾನಪದ ಶೈಲಿ ಗೀತೆ.
ಬಿಡಂಗಿಲ್ಲ ನಿನ್ನ
ಕ್ವಾರಿಮೀಸಿನ ಸವರಕೋಂತ.
ಕಾಯ್ತಿದ್ದ್ಯಾ ಗುಡಿಹತ್ರಕುಂತ.
ಬಂದಿ ನೋಡ ಬಿಂದಿಗಿ ಹೊತ್ತ.
ವಾರಿನೋಟ ಬೀರಿ ಅತ್ತ ಇತ್ತ.
ನಿನ್ನ ಕಂಡರ ನನಗೇನೋ ಸುಗ್ಗಿ.
ಕುಣಿತೈತಿ ನೋಡ ಮನಸು ಹಿಗ್ಗಿ.
ನೋಡತಿದ್ದರ ನೀ ಬಗ್ಗಿ ಬಗ್ಗಿ
ಕುದ್ದಂಗಾತು ಎದೆಯಾಗ ಹುಗ್ಗಿ.
ಒಪ್ಪಸ್ತೇನ ನಿಮ್ಮ ಮನಿಗೆ ಬಂದ
ಇಡತೇವಿ ಹಣ್ಣ ನಿಮ್ಮಪ್ಪನ ಮುಂದ.
ಸುತ್ತ ಹತ್ಹಳ್ಳಿಗೆ ನೀನೊಬ್ಳ ಚಂದ.
ಆಗುದಿಲ್ಲ ಬಿಟ್ಟಿರಾಕ ನನಗಿನ್ಮುಂದ.
ತ್ರಿನೇತ್ರಜ
ಶಿವಕುಮಾರ .ಹಿರೇಮಠ.
ಬಿಡಂಗಿಲ್ಲ ನಿನ್ನ
ಕ್ವಾರಿಮೀಸಿನ ಸವರಕೋಂತ.
ಕಾಯ್ತಿದ್ದ್ಯಾ ಗುಡಿಹತ್ರಕುಂತ.
ಬಂದಿ ನೋಡ ಬಿಂದಿಗಿ ಹೊತ್ತ.
ವಾರಿನೋಟ ಬೀರಿ ಅತ್ತ ಇತ್ತ.
ನಿನ್ನ ಕಂಡರ ನನಗೇನೋ ಸುಗ್ಗಿ.
ಕುಣಿತೈತಿ ನೋಡ ಮನಸು ಹಿಗ್ಗಿ.
ನೋಡತಿದ್ದರ ನೀ ಬಗ್ಗಿ ಬಗ್ಗಿ
ಕುದ್ದಂಗಾತು ಎದೆಯಾಗ ಹುಗ್ಗಿ.
ಒಪ್ಪಸ್ತೇನ ನಿಮ್ಮ ಮನಿಗೆ ಬಂದ
ಇಡತೇವಿ ಹಣ್ಣ ನಿಮ್ಮಪ್ಪನ ಮುಂದ.
ಸುತ್ತ ಹತ್ಹಳ್ಳಿಗೆ ನೀನೊಬ್ಳ ಚಂದ.
ಆಗುದಿಲ್ಲ ಬಿಟ್ಟಿರಾಕ ನನಗಿನ್ಮುಂದ.
ತ್ರಿನೇತ್ರಜ
ಶಿವಕುಮಾರ .ಹಿರೇಮಠ.
Comments
Post a Comment