ಭಾವಗೀತೆ

*ರಾಧಾಲಾಪ*
ಮುನಿಸು ಬಂತೇ ಮೋಹನ
ಈ ಬಾರಿ ಮನ್ನಿಸು ನನ್ನ.
ಅನುಕ್ಷಣ ಎದೆತಾಳದಲಿ
ನಿನ್ನದೇ ಧ್ಯಾನ
ಮನತಣಿಸು ಬಾ
ನುಡಿಸುತ ಕೊಳಲಗಾನ ||ಪ||
ಸೂರ್ಯನಿರೆ ನೂರುಕಣ್ಣು
ಗಮನಿಸುವವು
ಲೋಕದ ನಿಯಮಗಳೆನ್ನ
ತಡೆಯುತಿಹವು
ಬಾಲ್ಯವೇಕೆ ಕಳೆಯಿತು ಬೇಗ
ನಾ ಕಾಣೆನೋ
ಹರೆಯ ಬಂದು ಕಷ್ಟ ತಂತು
ಏಕೊ ಏನೋ.||೧||
ಮುರಳಿಗಾನ ಕೇಳಲೆಂದೆ
ಮುಸ್ಸಂಜೆಗೆ
ನಿನ್ನ ಸಖ್ಯ ಅರಸಿ ಬಂದೆ
ನಾನಿಲ್ಲಿಗೆ
ತೋರದಿರು ಮುಗದೆಯ ಮೇಲೆ ಕೋಪ ಹೀಗೆ
ಜೋತೆಗೂಡಿ ತೊಡೆಯೊ
ನಲುಮೆಯಿಂದ ಮನದ ಬೇಗೆ.||೨||
----- ---- --- -----
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ.

*ರಾಧಾಲಾಪ*
ಮುನಿಸು ಬಂತೇ ಮೋಹನ
ಈ ಬಾರಿ ಮನ್ನಿಸು ನನ್ನ.
ಅನುಕ್ಷಣ ಎದೆತಾಳದಲಿ
ನಿನ್ನದೇ ಧ್ಯಾನ
ಮನತಣಿಸು ಬಾ
ನುಡಿಸುತ ಕೊಳಲಗಾನ ||ಪ||
ಸೂರ್ಯನಿರೆ ನೂರುಕಣ್ಣು
ಗಮನಿಸುವವು
ಲೋಕದ ನಿಯಮಗಳೆನ್ನ
ತಡೆಯುತಿಹವು
ಬಾಲ್ಯವೇಕೆ ಕಳೆಯಿತು ಬೇಗ
ನಾ ಕಾಣೆನೋ
ಹರೆಯ ಬಂದು ಕಷ್ಟ ತಂತು
ಏಕೊ ಏನೋ.||೧||
ಮುರಳಿಗಾನ ಕೇಳಲೆಂದೆ
ಮುಸ್ಸಂಜೆಗೆ
ನಿನ್ನ ಸಖ್ಯ ಅರಸಿ ಬಂದೆ
ನಾನಿಲ್ಲಿಗೆ
ತೋರದಿರು ಮುಗದೆಯ ಮೇಲೆ ಕೋಪ ಹೀಗೆ
ಜೋತೆಗೂಡಿ ತೊಡೆಯೊ
ನಲುಮೆಯಿಂದ ಮನದ ಬೇಗೆ.||೨||
----- ---- --- -----
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ.
Comments
Post a Comment