*ನಿನ್ನ ನೆನಪು*
[07/02, 10:25 a.m.]
ಮಲೆನಾಡ ಮೈಸಿರಿಯ
ಪುಟ್ಟ ಬೆಟ್ಟದಾ ಮೇಲೆ
ಎಕಾಂಗಿಯಾಗಿರಲೆನಗೆ
ಮತ್ತೆ ಬಂದಿಹುದು ನಿನ್ನ ನೆನಪು
ಮುಸ್ಸಂಜೆ ವೇಳೆಯಲಿ
ಬೆಟ್ಟದಾ ಮರೆಯಲ್ಲಿ
ಸಂಧ್ಯೆಯ ಸಂಧಿಸುವ
ನೇಸರನು ಜ್ಞಾಪಿಸಿಹ ನಿನ್ನ ನೆನಪು
ಸುಳಿ ಸುಳಿದು ತಂಗಾಳಿ
ಮುದದಿ ತನುವನು ಕೆಣಕಿ
ಪಿಸುಮಾತನಾಡಿರಲು
ಮನವನು ಕಾಡಿತ್ತು ನಿನ್ನ ನೆನಪು
ಎಲ್ಲಿಂದಲೋ ತಾ ತೇಲಿ
ಅಲೆ ಅಲೆಯಲಿ ಬರುತಿಹ
ನಿನ್ನ ಇಂಚರ ಹೋಲುವ
ವೇಣುಗಾನವು ತಂತು ನಿನ್ನ ನೆನಪು
ಗೋಧೂಳಿಯ ರಂಗು
ಬಾನೆಡೆಗೆ ಸಾಗಿರಲು
ಆಗಸದಿ ಆಡುತಿಹ ಆ
ಗಾಳಿಪಟದಂತಿಹುದು ನಿನ್ನ ನೆನಪು
ನನ್ನ ಮುಸ್ಸಂಜೆಯಲು
ಇನ್ನೇನು ಉಳಿದಿಹುದು
ಎದೆಗೆ ಉಸಿರಿರುವವರೆಗು
ಆಸರೆಯ ಒರತೆಯಿದು ನಿನ್ನ ನೆನಪು
*** **** *** **** ***
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ
[07/02, 10:25 a.m.]
ಮಲೆನಾಡ ಮೈಸಿರಿಯ
ಪುಟ್ಟ ಬೆಟ್ಟದಾ ಮೇಲೆ
ಎಕಾಂಗಿಯಾಗಿರಲೆನಗೆ
ಮತ್ತೆ ಬಂದಿಹುದು ನಿನ್ನ ನೆನಪು
ಮುಸ್ಸಂಜೆ ವೇಳೆಯಲಿ
ಬೆಟ್ಟದಾ ಮರೆಯಲ್ಲಿ
ಸಂಧ್ಯೆಯ ಸಂಧಿಸುವ
ನೇಸರನು ಜ್ಞಾಪಿಸಿಹ ನಿನ್ನ ನೆನಪು
ಸುಳಿ ಸುಳಿದು ತಂಗಾಳಿ
ಮುದದಿ ತನುವನು ಕೆಣಕಿ
ಪಿಸುಮಾತನಾಡಿರಲು
ಮನವನು ಕಾಡಿತ್ತು ನಿನ್ನ ನೆನಪು
ಎಲ್ಲಿಂದಲೋ ತಾ ತೇಲಿ
ಅಲೆ ಅಲೆಯಲಿ ಬರುತಿಹ
ನಿನ್ನ ಇಂಚರ ಹೋಲುವ
ವೇಣುಗಾನವು ತಂತು ನಿನ್ನ ನೆನಪು
ಗೋಧೂಳಿಯ ರಂಗು
ಬಾನೆಡೆಗೆ ಸಾಗಿರಲು
ಆಗಸದಿ ಆಡುತಿಹ ಆ
ಗಾಳಿಪಟದಂತಿಹುದು ನಿನ್ನ ನೆನಪು
ನನ್ನ ಮುಸ್ಸಂಜೆಯಲು
ಇನ್ನೇನು ಉಳಿದಿಹುದು
ಎದೆಗೆ ಉಸಿರಿರುವವರೆಗು
ಆಸರೆಯ ಒರತೆಯಿದು ನಿನ್ನ ನೆನಪು
*** **** *** **** ***
✍🏼 ತ್ರಿನೇತ್ರಜ್
ಶಿವಕುಮಾರ. ಹಿರೇಮಠ
Comments
Post a Comment