( ಮಲ್ಲಿಕಾಮಾಲೆ ಛಂದಸ್ಸಿನಲ್ಲಿ.
3 4 3 4
3 4 4 )
*ಸೃಷ್ಟಿ ಲೀಲೆ*
ಎನಿತು ಚೆಲುವಿದು ನನ್ನ ಸೆಳೆಯಿತು
ತುಂಬಿ ತನುಮನ ತನನನ.
ದೇವ ರಚಿಸಿದ ಕಾವ್ಯ ಸೃಷ್ಟಿಯು
ಹೊಸತು ಕಣ್ಣಿಗೆ ಅನುದಿನ..||ಪ||
ಮಾರ ಎಸೆದಿಹ ಮೋಹ ಬಾಣವ
ಹಾಡಿ ಒಲವಿನ ಗಾಯನ.
ಇಳೆಗೆ ಹರೆಯದ ಕಳೆಯು ಮೂಡಲು
ಮತ್ತೆ ಪುಟಿದಿದೆ ಯೌವ್ವನ. ...||೧||
ಬುವಿಯ ದಾಹಕೆ ಸುರಿಯೆ ಮಳೆಯದು
ಪಚ್ಚೆ ಹಾಸಿನ ಪರಿಸರ.
ರೈತ ಬಿತ್ತಿದ ಬೀಜ ಮೊಳೆಯಲು
ಹೊಲವು ಹಸಿರಿನ ಸಾಗರ....||೨||
ನಾನು ನಿನ್ನೊಳು ನೀನು ನನ್ನೊಳು
ಬೆರೆಯೆ ಬದುಕಿದು ಪಾವನ.
ಆನು ನಿನ್ನೊಳು ಮೂಡಿ ನಿಲ್ಲಲು
ಬಾಳು ಸುಂದರ ಹೂಬನ.||೩||
--- --- --- --- --- --- ---
✍🏼 ತ್ರಿನೇತ್ರಜ.
Comments
Post a Comment