*ಅವ್ವಗೆ ನಮನ*
ಅವ್ವ ಎಂಬ ಪದವೇ ಜೀವ
ನೀಗಿಸುವುದು ಮನದ ನೋವ.|ಪ|
ಮೊದಲುಸಿರಿಗೆ ಬಂದ ಪದ.
ತೆರೆಯುವುದು ಆಗ ಜಗದ ಕದ.
ಅವ್ವ ಎಂದರೆ ಬಾಳಿನ ಉಸಿರು.
ಸೃಷ್ಟಿಯ ಮೂಲವೆ ತಾಯಿಯ ಬಸಿರು.||೧||
ನೋವುಂಡು ಜನ್ಮ ಕೊಡುವ
ಎದಗಪ್ಪಿ ಹಾಲು ಉಣಿಸುವ
ಲೋಕದ ಏಕೈಕ ವಾತ್ಸಲ್ಯ ಶರಧಿ,
ಉಸಿರಿರುವವರೆಗೆ ನಾ ನಮಿಸುವೆ ಮನದಿ||೨||
.... ..... .... .... ..... .... ..
..✍🏼 ತ್ರಿನೇತ್ರಜ.
ಶಿವಕುಮಾರ. ಹಿರೇಮಠ.
Comments
Post a Comment