ಭಾವಗೀತೆ
*ಸವಿನೆನಪ ಸವಿ*
ಸಂಧ್ಯೆ ಮೂಡಿಬಂದಾಗ
ಪಾರಿಜಾತವರಳಿತು.
ಸೌಗಂಧಚೆಲ್ಲುತ ನಿನ್ನ
ನೆನಪನ್ನು ತಂದಿತು.|ಪ|
ಕೆಂದುಟಿಯ ರಂಗು ನೆನೆದು
ಹೃದಯ ಬಿಸಿಯಾಯಿತು.
ಆ ನೀಲಿ ಕಣ್ಣುಲಿ ಹೇಗೋ
ಮನ ಕಳೆದು ಹೋಯಿತು.|೧|
ಬಾಹುಬಂಧನಕೆ ತೋಳು
ಪರಿತಪಿಸಿ ಚಾಚಿವೆ.
ಬೆಳದಿಂಗಳ ತಂಪು ಏಕೋ
ಎದೆಯ ಬಿಸಿಗೆ ಕಾರಣವೆ!|೨|
ಸೆರಗ ಹಾಸಿ ಸಮ್ಮೊಹನದಿ
ನಿಶೆಯು ನಶೆಯ ತಂದಿತು.
ಸಂಗಾತಿ ನಿನ್ನಯ ನೆನಪು
ಮನದ ತುಂಬಾ ತುಂಬಿತು.|೩|
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
9945915780
shivakumarh13
@gmail.com
*ಸವಿನೆನಪ ಸವಿ*
ಸಂಧ್ಯೆ ಮೂಡಿಬಂದಾಗ
ಪಾರಿಜಾತವರಳಿತು.
ಸೌಗಂಧಚೆಲ್ಲುತ ನಿನ್ನ
ನೆನಪನ್ನು ತಂದಿತು.|ಪ|
ಕೆಂದುಟಿಯ ರಂಗು ನೆನೆದು
ಹೃದಯ ಬಿಸಿಯಾಯಿತು.
ಆ ನೀಲಿ ಕಣ್ಣುಲಿ ಹೇಗೋ
ಮನ ಕಳೆದು ಹೋಯಿತು.|೧|
ಬಾಹುಬಂಧನಕೆ ತೋಳು
ಪರಿತಪಿಸಿ ಚಾಚಿವೆ.
ಬೆಳದಿಂಗಳ ತಂಪು ಏಕೋ
ಎದೆಯ ಬಿಸಿಗೆ ಕಾರಣವೆ!|೨|
ಸೆರಗ ಹಾಸಿ ಸಮ್ಮೊಹನದಿ
ನಿಶೆಯು ನಶೆಯ ತಂದಿತು.
ಸಂಗಾತಿ ನಿನ್ನಯ ನೆನಪು
ಮನದ ತುಂಬಾ ತುಂಬಿತು.|೩|
✍🏼 ತ್ರಿನೇತ್ರಜ
ಶಿವಕುಮಾರ. ಹಿರೇಮಠ.
9945915780
shivakumarh13
@gmail.com
Comments
Post a Comment